ಎಂಡೈವ್-
	ಈ ಸಸ್ಯ ಕಂಪಾಸಿಟೆ ಕುಟುಂಬದ ಚಿಕೊರಿಯಮ್ ಜಾತಿಯ ಎಂಡೈವಿಯ ಪ್ರಭೇದಕ್ಕೆ ಸೇರಿದೆ. 2 ರಿಂದ 3 ಅಡಿ ಎತ್ತರ ಬೆಳೆಯುವ ಏಕಋತುವಿನ ಪರ್ಣಸಸಿ. ಗುಂಪಾಗಿರುವ ಇದರ ಎಲೆಗಳು ಹೂಗೊಂಚಲಿಗಿಂತ ಎತ್ತರವಾಗಿರುತ್ತವೆ. ಹೂಗೊಂಚಲು ನಸುಗೆಂಪು ಚಂಡಿನಂತಿರುತ್ತದೆ. ತರಕಾರಿ ಸಸ್ಯ ಇದರ ಎಳೆಯ ಎಲೆಗಳನ್ನು ಕೋಸಂಬರಿಯಾಗಿ ಬಳಸುತ್ತಾರೆ. ಇದರ ಉಗಮಸ್ಥಾನ ಭಾರತವಾದರೂ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಈಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಇದರ ಸೊಪ್ಪು ಲೆಟ್ಟೊóಸ್‍ಗಿಂತ ಸ್ವಲ್ಪ ಒಗರು.									
	   (ಡಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ